ಖಾಸಗಿ ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆ ಪತ್ರದಲ್ಲೇನಿದೆ?
December 01, 2023
ಬೆಂಗಳೂರು: ಇಂದು ಮುಂಜಾನೆ ಬೆಂಗಳೂರು ಹಾಗೂ ಆನೇಕಲ್ ನ ಒಟ್ಟು 44 ಶಾಲೆಗಳಿಗೆ ಬಾಂಬ್ ಬೆದರಿಕೆಯ ಈ-ಮೇಲ್ ಬಂದಿದೆ. ಬೆಳಗ್ಗೆ 6-30 ಕ್ಕೆ ವಿದ್ಯಾಶಿಲ್ಪ ಅಕಾಡೆಮಿ ಶಾಲೆಗೆ ಬಂದ ಬೆದರಿಕೆ ಈ ಮೇಲ್ ಹೀಗಿದೆ. KHarijites@beeble.com ನಿಂದ ಈ ಮೇಲ್ ಬಂದಿದೆ.
ಶಾಲೆಗೆ ಬಂದಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಆತಂಕದಿಂದಲೇ ಹೊರಗೆ ಕಳಿಸಲಾಗಿದೆ. ಪೋಷಕರು ಓಡೋಡಿ ಬಂದು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಅಷ್ಟೆ ಅಲ್ಲದೆ ಈ ಮೇಲ್ ಬಂದಿರುವ ಅಕ್ಕಪಕ್ಕದ ಶಾಲೆಗಳಿಗೂ, ಸರ್ಕಾರಿ ಶಾಲೆಗಳಿಗೂ ರಜೆ ಕೊಡಲಾಗಿದೆ.ಪತ್ರದಲ್ಲೇನಿದೆ?
"ಶಾಲೆ ಮೈದಾನದಲ್ಲಿ ಸ್ಪೋಟಕಗಳಿವೆ.
ನವೆಂಬರ್ 26 ರಂದು ತಾಜ್ ಸ್ಪೋಟಗೊಂಡಿದ್ದು ಗೊತ್ತಿದೆ.
ನೀವೆಲ್ಲ ಅಲ್ಲಾಹುವಿನ ಶತ್ರುಗಳು. ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಸಾಯಿಸುತ್ತೇವೆ. ನಿಮಗೆ ನಮ್ಮ ಅಡಿಯಾಳಾಗುವ ಅವಕಾಶ ಇದೆ. ಅಥವಾ ಅಲ್ಲಾಹುವಿನ ಧರ್ಮವನ್ನು ಪಾಲಿಸಿ. ನಿಮ್ಮ ದೇವರ ಮೂರ್ತಿಗಳು, ಬುದ್ಧನ ಮೂರ್ತಿಗಳು ಸ್ಪೋಟಕಗಳಿಂದ ಉಡಾಯಿಸಲ್ಪಡುತ್ತದೆ.
ಅಲ್ಲಾಹುವಿನ ಧರ್ಮವನ್ನು ಭಾರತದ ಎಲ್ಲೆಡೆ ಹಬ್ಬಿಸುತ್ತೇವೆ. ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅಥವಾ ಇಸ್ಲಾಂ ಕತ್ತಿಯ ಎದುರು ಸಾಯಿರಿ.
ನಂಬದವರನ್ನು ಸಿಕ್ಕಾಗ ಅವರ ತಲೆ ಕಡಿದುಬಿಡಿ, ಎಲ್ಲಾ ಬೆರಳುಗಳನ್ನು ತುಂಡು ಮಾಡಿ.ಅಲ್ಲಾಹು ಅಕ್ಬರ್ " ಎಂದು ಭಯಾನಕ ಸಂದೇಶ ಇದೆ.
ಒಟ್ಟು 44 ಶಾಲೆಗಳಿಗೆ ಈ ಮೇಲ್ ಹೋಗಿದೆ. ಪ್ರಮುಖವಾಗಿ 6-30 ರಿಂದ 9-30 ರ ಬೆಳಗ್ಗಿನ ಸಮಯದಲ್ಲಿ ಬೆದರಿಕೆ ಸಂದೇಶಗಳು ರವಾನೆ ಆಗಿವೆ. ಮಾರತಹಳ್ಳಿಯ ನ್ಯೂ ಅಕಾಡೆಮಿ ಸ್ಕೂಲ್, ಕೆಂಪಾಪುರ, ಬಸವೇಶ್ವರ ನಗರದ ನ್ಯಾಷನಲ್ ಅಕಾಡೆಮಿ ಲರ್ನಿಂಗ್ ಏರಿಯಾ, ಯಲಹಂಕ ನ್ಯೂ ಟೌನ್‌ನ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಚಾಮರಾಜಪೇಟೆಯ ಭಾವನ ಪ್ರೆಸ್ ಸ್ಕೂಲ್ ಮೈಸೂರು ರಸ್ತೆ ಇತ್ಯಾದಿ ಶಾಲೆಗಳಿಗೆ ಈ ಬೆದರಿಕೆ ಮೇಲ್ ಬಂದಿದೆ.
Tags