ಏ. 26ಕ್ಕೆ ವೋಟ್ ಹಾಕಿ ಈ ಹೋಟೆಲ್‌ಗಳಿಗೆ ಬನ್ನಿ; ಏನೇ ತಿಂದ್ರೂ 10 ಪರ್ಸೆಂಟ್ ಡಿಸ್ಕೌಂಟ್!
April 24, 2024
ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮತದಾನ ಹೆಚ್ಚಳ ಮಾಡಲು ನಾನಾ ಕಸರತ್ತುಗಳು ನಡೆಯುತ್ತಿವೆ. ಸರ್ಕಾರಿ ಕಚೇರಿ, ಐಟಿ ಕಂಪನಿಗಳಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಇನ್ನು ಬೆಂಗಳೂರಿನಲ್ಲಿ ಕೆಲವು ಹೋಟೆಲ್ ಮಾಲೀಕರು ತಮ್ಮದೊಂದು ಪ್ರಯತ್ನಕ್ಕೆ ಕೈಹಾಕಿದ್ದಾರೆ. ಏಪ್ರಿಲ್ 26ರ ಮೊದಲ ಹಂತದ ಚುನಾವಣೆ ದಿನ ಬೆಂಗಳೂರಿನಲ್ಲಿ ಮತ ಹಾಕಿ, ತಮ್ಮ ಹೋಟೆಲ್‌ಗಳಿಗೆ ಬಂದರೆ ಶೇಕಡಾ 10ರಷ್ಟು ರಿಯಾಯಿತಿ (Discounts in Hotels) ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮತ ಹಾಕಿ, ಬೆರಳು ತೋರಿಸಿ. ಪ್ರತಿ ಐಟಂ ಮೇಲೆ ಶೇಕಡಾ 10 ಡಿಸ್ಕೌಂಟ್ ಪಡೆಯಿರಿ ಎಂದು ಹೇಳಿದ್ದಾರೆ.
Tags
