ಹಾಸನ ಸಂಸದ (Hassan MP), ಜೆಡಿಎಸ್ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದಲೇ ಖೆಡ್ಡಾ ತೋಡಲಾಗಿದೆ. ಇದರ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಇದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.ಈ ಸಂಬಂಧ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಈ ಪ್ರಕರಣದಲ್ಲಿ ವಿಡಿಯೊದಲ್ಲಿದ್ದ ಯಾವೊಬ್ಬ ಸಂತ್ರಸ್ತೆ ಸಹ ಸರ್ಕಾರದ ಬಳಿ ಬಂದು ದೂರು ಕೊಟ್ಟಿಲ್ಲ. ಮಹಿಳಾ ಆಯೋಗವು ನೀಡಿದ ವಿಡಿಯೊ ಸಾಕ್ಷ್ಯವನ್ನು ಇಟ್ಟುಕೊಂಡು ಕ್ರಮ ಕೈಗೊಂಡಿದೆ. ಇದಕ್ಕಿಂತ ಮೊದಲು ಮಹಿಳಾ ಆಯೋಗದ ಅಧ್ಯಕ್ಷರು ಸಿಎಂ ಸಿದ್ದರಾಮಯ್ಯ ಅವರಿಗೆ ಏಪ್ರಿಲ್ 25ರಂದು ಪತ್ರ ಬರೆಯುತ್ತಾರೆ. ಕೊನೆಗೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಎಸ್‌ಐಟಿ ತನಿಖೆಗೆ ಪ್ರಕರಣವನ್ನು ಕೊಡಲಾಗುತ್ತದೆ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಏಪ್ರಿಲ್ 28ರಂದು ಬೆಂಗಳೂರಿನಲ್ಲಿ ಕುಳಿತುಕೊಂಡು ಮಹಿಳೆಯೊಬ್ಬಳಿಂದ ದೂರನ್ನು ಬರೆಸಿಕೊಂಡು ಟೈಪ್ ಮಾಡಿಸಿಕೊಂಡು ಆ ಪ್ರಕರಣವನ್ನು ಹೊಳೆನರಸೀಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪವನ್ನು ಮಾಡಿದರು.
Hassan Pen Drive Case: ಪ್ರಜ್ವಲ್‌ಗೆ ಕಾಂಗ್ರೆಸ್ ಸರ್ಕಾರದಿಂದಲೇ ಖೆಡ್ಡಾ? ಏನಿದು ಹಕೀಕತ್ತು? ಮಾಜಿ ಸಿಎಂ ಗರಂ ಆಗಿದ್ದೇಕೆ?
April 30, 2024
Tags