ಐದು ದಿನ ಮದ್ಯ ಮಾರಾಟಕ್ಕೆ ಬ್ರೇಕ್! ಜೂನ್‌ 1ರಿಂದ ಸಿಗಲ್ಲ ಎಣ್ಣೆ

Waves of Karnataka


 ಮೊನ್ನೆ ಬೆಂಗಳೂರು ಜಿಲ್ಲಾಡಳಿತದ ಅದೊಂದು ಆದೇಶಕ್ಕೆ ಮದ್ಯ ಪ್ರಿಯರು ಮದ್ಯದಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. 5 ದಿನಗಳ ಕಾಲ ಮದ್ಯದಂಗಡಿಗಳು ಕ್ಲೋಸ್‌‌ (Liquor ban) ಆಗುವ ಕಹಿ ಸುದ್ದಿಯನ್ನು ಕೇಳಿದ್ದೆ ತಡ ಮದ್ಯಪ್ರಿಯರು ಈಗಿನಿಂದಲೇ ಎಣ್ಣೆ ಸ್ಟಾಕ್‌ ಇಟ್ಟುಕೊಳ್ಳಲು ಮುಂದಾಗುತ್ತಿದ್ದಾರೆ.

ಅಂದಹಾಗೇ ಲೋಕಸಭಾ ಚುನಾವಣೆ ಹಾಗೂ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಹೊರಬೀಳಲಿರುವ ಕಾರಣ ರಾಜಧಾನಿ ಬೆಂಗಳೂರಲ್ಲಿ ಒಂದು ವಾರದ ಕಾಲ ಮದ್ಯ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ. ಮತ ಎಣಿಕೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧ (Liquor Bandh) ಮಾಡಿ ಮದ್ಯ ಮಾರಾಟ ರಹಿತ ದಿನಗಳೆಂದು (Dry day) ಘೋಷಣೆ ಮಾಡಲಾಗಿದೆ.