ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

Waves of Karnataka


 ಲೋಕಸಭೆ ಚುನಾವಣೆ(Lok Sabha Election 2024)ಯ ಕೊನೆಯ ಹಂತ ಮತದಾನದ ಬಹಿರಂಗ ಪ್ರಚಾರ ಕೊನೆಗೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ವಾಡಿಕೆಯಂತೆ ಪ್ರಯಾಣವನ್ನು ಕೈಗೊಂಡಿದ್ದು, ನಿನ್ನೆ ಸಂಜೆಯಿಂದಲೇ ಕನ್ಯಾಕುಮಾರಿ(Kanyakumari)ಯ ವಿವೇಕಾನಂದ ಕಲ್ಲಿನ ಸ್ಮಾರಕ(Vivekananda Rock Memorial)ದಲ್ಲಿ ಧ್ಯಾನ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಕನ್ಯಾಕುಮಾರಿಗೆ ಬಂದಿಳಿಯುತ್ತಿದ್ದಂತೆ ಅವರ ಹಳೆಯ ಫೊಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 1991ರಲ್ಲಿ ನರೇಂದ್ರ ಮೋದಿ, ಅಂದಿನ ಬಿಜೆಪಿ ನಾಯಕ ಮುರಳಿ ಮನೋಹರ್‌ ಜೋಷಿ(MM Joshi) ಕನ್ಯಾಕುಮಾರಿಗೆ ಭೇಟಿ ನೀಡಿದ್ದ ಫೋಟೋ ವೈರಲ್‌ ಆಗಿದೆ.

ಈ 33 ವರ್ಷ ಹಳೆಯದಾದ ಈ ಅದ್ಭುತ ಚಿತ್ರಕ್ಕೆ ನೆಟ್ಟಿಗರಿಂದ ನಾನಾ ರೀತಿಯ ಕಮೆಂಟ್‌ಗಳು ಬಂದಿವೆ. ಡಿ. 11, 1991 ರಂದು ಬಿಜೆಪಿ ಕೈಗೊಂಡಿದ್ದ ಏಕತಾ ಯಾತ್ರೆ ಕನ್ಯಾಕುಮಾರಿಯಿಂದ ಶುರುವಾಗಿ ಕಾಶ್ಮೀರದಲ್ಲಿ ಮುಕ್ತಾಗೊಂಡಿತ್ತು. ಈ ಯಾತ್ರೆಯಲ್ಲಿ ನರೇಂದ್ರ ಮೋದಿ, ಮುರಳಿ ಮನೋಹರ್‌ ಜೋಷಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವಿವೇಕಾನಂದ ಪ್ರತಿಮೆ ಎದುರು ನಿಂತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.