ನಾಲ್ಕು ಹಂತಗಳ ಮತದಾನ ಅಂತ್ಯ; ಕಾಂಗ್ರೆಸ್ ಆಂತರಿಕ ವರದಿಯಲ್ಲೇನಿದೆ?

Waves of Karnataka


 ಲೋಕಸಭಾ ಚುನಾವಣೆ (Lok Sabha Election 2024)ಯ ಮೊದಲ ನಾಲ್ಕು ಹಂತದ ಮತದಾನ ಈಗಾಗಲೇ ಮುಗಿದಿದೆ. ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ‘ಇಂಡಿಯಾ’ ಮೈತ್ರಿಕೂಟ (I.N.D.I.A bloc)ದ ಆಂತರಿಕ ಸಮೀಕ್ಷೆಯ ಫಲಿತಾಂಶಗಳನ್ನು ಬಹಿರಂಗಪಡಿಸಿದರು. ಮೈತ್ರಿಕೂಟದ ಪಾಲುದಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ʼʼಇಂಡಿಯಾʼ ಬಣಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಸೀಟು ದೊರೆಯಲಿದೆ. ನಾಲ್ಕು ಹಂತಗಳ ಮತದಾನದಲ್ಲಿಯೂ ʼಇಂಡಿಯಾʼ ಒಕ್ಕೂಟ ಮುನ್ನಡೆ ಸಾಧಿಸಿದೆʼʼ ಎಂದು ತಿಳಿಸಿದರು.

ಒಬಿಸಿ, ಎಸ್‌ಸಿ / ಎಸ್‌ಟಿ ಸಮುದಾಯಗಳ ಮೀಸಲಾತಿ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮಾತನಾಡಿದ ಖರ್ಗೆ, ʼʼಕೆಲವರು ಮಾತ್ರ ಮೀಸಲಾತಿ ಪಡೆದುಕೊಳ್ಳಬಹುದು. ಆದರೆ ರಾಷ್ಟ್ರದ ಭವಿಷ್ಯಕ್ಕಾಗಿ ಕೆಲಸ ಮಾಡುವುದು ದೇಶದ ಪ್ರತಿಯೊಬ್ಬರ ಜವಾಬ್ದಾರಿʼʼ ಎಂದು ಹೇಳಿದರು. ʼʼಮೀಸಲಾತಿ ಭಾರತದ ಪ್ರಜಾಪ್ರಭುತ್ವವನ್ನು ಭದ್ರಪಡಿಸುವ ಒಂದು ಭಾಗ. ಕಾಂಗ್ರೆಸ್ ಯಾವಾಗಲೂ ಮೀಸಲಾತಿಯ ಬಗ್ಗೆ ಮಾತನಾಡುತ್ತದೆ. ಆದರೆ ಅದರಿಂದ ನನಗೆ ಪ್ರಯೋಜನವೇನು? ಎಂದು ಅನೇಕರು ಹೇಳುತ್ತಾರೆ. ಮೀಸಲಾತಿ ಪ್ರಯೋಜನಗಳನ್ನು ಕೆಲವರು ಪಡೆಯಬಹುದು, ಆದರೆ ಸಂವಿಧಾನವನ್ನು ಉಳಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಇದರಲ್ಲಿ ವಿಫಲವಾದರೆ ನಾವು ಗುಲಾಮರಾಗಬೇಕಾಗುತ್ತದೆʼʼ ಎಂದು ವಿವರಿಸಿದರು.