ವೋಟೂ ಹಾಕಿಲ್ಲ..ಪ್ರಚಾರಕ್ಕೂ ಬಂದಿಲ್ಲ; ಜಯಂತ್‌ ಸಿನ್ಹಾಗೆ ಬಿಜೆಪಿ ಶೋಕಾಸ್‌ ನೊಟೀಸ್‌

Waves of Karnataka


 ಲೋಕಸಭೆ ಚುನಾವಣೆ(Lok Sabha Election 2024)ಯಲ್ಲಿ ಈ ಬಾರಿ ಟಿಕೆಟ್‌ ಸಿಗದೇ ಬೇಸರಗೊಂಡು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಕೇಂದ್ರ ಸಚಿವ, ಸಂಸದ ಜಯಂತ್ ಸಿನ್ಹಾ(Jayant Sinha)ಗೆ ಬಿಜೆಪಿ ಶೋಕಾಸ್‌ ನೊಟೀಸ್(Show cause Notice) ಜಾರಿ ಮಾಡಿದೆ. ಜಯಂತ್‌ ಸಿನ್ಹಾ ನಿನ್ನೆ ನಡೆದಿದ್ದ 5 ನೇ ಹಂತದ ಚುನಾವಣೆ(Fifth phase Election) ವೇಳೆ ಜಯಂತ್ ಸಿನ್ಹಾ ಮತದಾನ ಮಾಡಿರಲಿಲ್ಲ. ಅದೂ ಅಲ್ಲದೇ ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲೂ ಭಾಗಿಯಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಪಕ್ಷದ ವರಿಷ್ಠರು ಕಾರಣ ವಿವರಿಸುವಂತೆ ಒತ್ತಾಯಿಸಿ ನೊಟೀಸ್ ಜಾರಿಗೊಳಿಸಿದೆ.