ಲವ್ ಜಿಹಾದ್ ಶುರುವಾಗಿದ್ದೇ ಜಾರ್ಖಂಡ್ನಿಂದ; ಜೆಎಮ್ಎಮ್ ವಿರುದ್ಧ ಮೋದಿ ಗಂಭೀರ ಆರೋಪ
May 28, 2024
ಲೋಕ ಸಭಾ ಚುನಾವಣೆ (Lok Sabha Election) ಕೊನೇ ಹಂತದ ಮತದಾದನ ಹಿನ್ನೆಲೆಯಲ್ಲಿ ಜಾರ್ಖಂಡ್ನಲ್ಲಿ ಪ್ರಚಾರ ಸಭೆಗಳನ್ನು ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಮ್ಎಮ್) ವಿರುದ್ಧ ಹಲವಾರು ಆರೋಪಗಳನ್ನು ಮಾಡಿದರು. ಜಾರ್ಖಂಡ್ನ ದುಮ್ಕಾದಲ್ಲಿ ಮಂಗಳವಾರ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಿಂದೂ ಧರ್ಮಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವ ‘ಲವ್ ಜಿಹಾದ್’ ಆರಂಭಗೊಂಡಿರುವುದೇ ಜಾರ್ಖಂಡ್ನಿಂದ ಎಂದು ಹೇಳಿಕೆ ನೀಡಿದ್ದಾರೆ.
ಜೆಎಂಎಂ ನಿರಂತರವಾಗಿ ಕೋಮುವಾದಿ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದ ಮೋದಿ, ಜಾರ್ಖಂಡ್ ನ ಒಂದು ಜಿಲ್ಲೆಯಲ್ಲಿ ಭಾನುವಾರದ ಸಾಂಪ್ರದಾಯಿಕ ರಜಾದಿನವನ್ನು ಶುಕ್ರವಾರಕ್ಕೆ ಬದಲಾಯಿಸಲಾಗಿದೆ ಎಂದು ಹೇಳಿದರು. ವಾಸ್ತವದಲ್ಲಿ ಭಾನುವಾರ ಹಿಂದೂಗಳಿಗೆ ಸಂಬಂಧಿಸಿದ್ದಲ್ಲ ಕ್ರಿಶ್ಚಿಯನ್ ಸಮುದಾಯಕ್ಕೆ ಸಂಬಂಧಿಸಿದೆ. 200-300 ವರ್ಷಗಳಿಂದ ರಜಾದಿನವಾಗಿ ಪರಿಗಣಿಸಲಾಗಿದೆ. ಈಗ ಅದನ್ನು ಶುಕ್ರವಾರಕ್ಕೆ ಬದಲಾಯಿಸಲಾಗಿದೆ ಎಂದು ಮೋದಿ ಆರೋಪಿಸಿದ್ದಾರೆ.
Tags