ಪಿಂಚಣಿ, ನರೇಗಾ ಹಣ ರೈತರ ಸಾಲಕ್ಕೆ ಜಮೆ; ಬ್ಯಾಂಕ್‌ ವಿರುದ್ಧ ಸಿಎಂ ಗರಂ! ಕೂಡಲೇ ನಿಲ್ಲಿಸಲು ಸೂಚನೆ

Waves of Karnataka


 ಬರ ಪರಿಹಾರ (Drought Relief), ಮುಂಗಾರು ಮಳೆ, ಬಿತ್ತನೆ ಬೀಜ, ರಸ ಗೊಬ್ಬರ ವಿತರಣೆ, ಶಿಕ್ಷಣ, ಕಾನೂನು ಸುವ್ಯವಸ್ಥೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲು ವಿಧಾನಸೌಧದಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ರೈತರ ಖಾತೆಗಳಿಗೆ ಜಮೆಯಾಗುತ್ತಿರುವ ಬಗ್ಗೆ ಕೆಂಡವಾಗಿದ್ದಾರೆ. ಇದು ತಕ್ಷಣವೇ ನಿಲ್ಲಬೇಕು. ಕೂಡಲೇ ಎಲ್ಲ ಬ್ಯಾಂಕ್‌ಗಳಿಗೂ ಪತ್ರ ಬರೆದು ತಾಕೀತು ಮಾಡಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದರು.

ಪಿಂಚಣಿ, ನರೇಗಾ ಕೂಲಿಗೆ ಸಂಬಂಧಪಟ್ಟ ಹಣವು ರೈತರ ಬ್ಯಾಂಕ್‌ಗಳಿಗೆ ಜಮೆಯಾಗುತ್ತಿದ್ದರೆ ಅದನ್ನು ಬ್ಯಾಂಕ್‌ನವರು ರೈತರ ಸಾಲಗಳಿಗೆ ವಜಾ ಮಾಡಿಕೊಳ್ಳುವುದು ಸರಿಯಲ್ಲ. ಹೀಗಾಗಿ ಬ್ಯಾಂಕ್‌ಗಳಿಗೆ ಖಡಕ್‌ ಸೂಚನೆಯನ್ನು ರವಾನೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದರು.