ಭಾರತದಲ್ಲಿ ನೀಗ್ರೊಗಳಿದ್ದಾರೆ…; ಇದೀಗ ಬಂಗಾಳ ಕಾಂಗ್ರೆಸ್​​ ಅಧ್ಯಕ್ಷರ ಸರದಿ

Waves of Karnataka


 ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಗುರುವಾರ ಸ್ಯಾಮ್ ಪಿತ್ರೋಡಾ (Sam Pitroda) ಅವರ “ಜನಾಂಗೀಯ” ಹೇಳಿಕೆಯನ್ನು (Racist Comment) ಸಮರ್ಥಿಸಿಕೊಂಡಿದ್ದು, ಭಾರತದಲ್ಲೂ ಕಪ್ಪು ಚರ್ಮದವರನ್ನು (ನಿಗ್ರೊಗಳು) ಹೋಲುವ ಜನರಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ವಿವಾದಕ್ಕೆ ಇನ್ನಷ್ಟು ತುಪ್ಪ ಸುರಿದಿದೆ. ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಕಾಣುತ್ತಾರೆ ಎಂಬ ಸ್ಯಾಮ್​ ಪಿತ್ರೊಡಾ ಹೇಳಿಕೆಯು ಬಿಜೆಪಿಯಿಂದ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಚರ್ಮದ ಬಣ್ಣವನ್ನು ಆಧರಿಸಿ ಭಾರತೀಯರಿಗೆ ಅಗೌರವ ತೋರಿದೆ ಎಂಬ ಆರೋಪ ಮಾಡಿತ್ತು. ಅದರ ಬೆನ್ನಲ್ಲೇ ಚೌಧರಿ ತನ್ನ ಹೇಳಿಕೆ ನೀಡಿದ್ದಾರೆ.