ದೇಶMumbai Satta Bazar: ಮೋದಿ ಹ್ಯಾಟ್ರಿಕ್ ಗ್ಯಾರಂಟಿ ಎಂದ ಮುಂಬೈ ಸಟ್ಟಾ ಬಜಾರ್; ಕಾಂಗ್ರೆಸ್‌ಗೆ ಎಷ್ಟು ಕ್ಷೇತ್ರ?
May 30, 2024
ಲೋಕಸಭೆ ಚುನಾವಣೆಯ (Lok Sabha Election 2024) 7ನೇ ಅಥವಾ ಕೊನೆಯ ಹಂತದ ಮತದಾನವು ಜೂನ್ 1ರಂದು ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಿದೆ. ಹಾಗಾಗಿ, ಎಲ್ಲರ ಗಮನವೀಗ ಚುನಾವಣೆ ಫಲಿತಾಂಶದ ಮೇಲಿದೆ. ಇದರ ಮಧ್ಯೆಯೇ, ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಮುಂಬೈ ಸಟ್ಟಾ ಬಜಾರ್ (Mumbai Satta Bazar) ವರದಿ ಪ್ರಕಟಿಸಿದ್ದು, ನರೇಂದ್ರ ಮೋದಿ (Narendra Modi) ಅವರು ಹ್ಯಾಟ್ರಿಕ್ ಬಾರಿಸುವುದು ನಿಶ್ಚಿತ ಎಂದು ತಿಳಿಸಿದೆ.ಪ್ರಕಾರ, ಚುನಾವಣೆಯಲ್ಲಿ ಬಿಜೆಪಿಯು 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಈ ಬಾರಿ 55-65 ಕ್ಷೇತ್ರಗಳಲ್ಲಿ ಮಾತ್ರ ಜಯಿಸಲಿದೆ. ಇನ್ನು, ರಾಮಮಂದಿರ ಕಾರಣದಿಂದ ಬಿಜೆಪಿಗೆ ಪ್ರಮುಖವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 64-66 ಕ್ಷೇತ್ರಗಳು ಲಭಿಸಲಿವೆ ಎಂದು ವರದಿ ತಿಳಿಸಿದೆ. ಇದಕ್ಕೂ ಮೊದಲು ಮುಂಬೈ ಸಟ್ಟಾ ಬಜಾರ್ ಸಮೀಕ್ಷೆಯು ಬಿಜೆಪಿ 270-280 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದರೆ, ಕಾಂಗ್ರೆಸ್ 70-80 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ತಿಳಿಸಿತ್ತು.
Tags