ಎನ್‌ಡಿಎಗೆ 350ಕ್ಕೂ ಹೆಚ್ಚು, ಇಂಡಿಯಾ ಕೂಟ 120ಕ್ಕೆ ಸೀಮಿತ; ಪ್ರತಿ ಸಮೀಕ್ಷೆಯ ವಿವರ ಇಲ್ಲಿದೆ

Waves of Karnataka


 ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ, ದೇಶದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಲೋಕಸಭೆ ಚುನಾವಣೆಯು (Lok Sabha Election 2024) ಮುಕ್ತಾಯಗೊಂಡಿದೆ. ಈಗ ಮತಗಟ್ಟೆ ಸಮೀಕ್ಷೆಯ ವರದಿಗಳು ಲಭ್ಯವಾಗಲಿವೆ. ಚುನಾವಣೆ ಫಲಿತಾಂಶ ಏನಾಗಬಹುದು? ಯಾವ ಪಕ್ಷಕ್ಕೆ ಹೆಚ್ಚಿನ ಕ್ಷೇತ್ರಗಳು ಸಿಗಬಹುದು? ಯಾರು ದೇಶದ ಪ್ರಧಾನಿಯಾಗಬಹುದು ಎಂಬುದಕ್ಕೆ ಮತಗಟ್ಟೆ ಸಮೀಕ್ಷೆಯು ದಿಕ್ಸೂಚಿಯಾಗಿದೆ. ಹಾಗಾಗಿ, ಚುನಾವಣೋತ್ತರ ಸಮೀಕ್ಷೆಯು ಫಲಿತಾಂಶದಷ್ಟೇ ಕುತೂಹಲ ಕೆರಳಿಸಿದೆ. ಈ ಮತಗಟ್ಟೆ ಸಮೀಕ್ಷೆಯ ಕ್ಷಣಕ್ಷಣದ (Exit Poll 2024 Live) ಮಾಹಿತಿ ಇಲ್ಲಿದೆ.