ನನ್ನ ಮೇಲೆ ಮೋದಿಗಿರುವಷ್ಟು ದೇವರ ಕೃಪೆ ಇಲ್ಲ ಎಂದ ರಾಹುಲ್ ಗಾಂಧಿ; ಏಕಿಂಥ ಮಾತು?
June 12, 2024
ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ಪರ್ಧಿಸಿದ ವಯನಾಡು ಹಾಗೂ ರಾಯ್‌ಬರೇಲಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರೀಗ ಉಭಯ ಸಂಕಟಕ್ಕೆ ಸಿಲುಕಿದ್ದಾರೆ. ವಯನಾಡು ಸಂಸದನಾಗಿಯೇ ಮುಂದುವರಿಯಬೇಕೋ ಅಥವಾ ತಾಯಿ ಸೋನಿಯಾ ಗಾಂಧಿ ಕ್ಷೇತ್ರವಾಗಿದ್ದ ರಾಯ್‌ಬರೇಲಿ ಸಂಸದನಾಗಿ ಪ್ರಮಾಣವಚನ ಸ್ವೀಕರಿಸಬೇಕೋ ಎಂಬ ಗೊಂದಲ ಕಾಡುತ್ತಿದೆ. ಇದರ ಬಗ್ಗೆಯೇ ಕೇರಳದಲ್ಲಿ ಮಾತನಾಡಿದ ಅವರು, “ನರೇಂದ್ರ ಮೋದಿ ಅವರಂತೆ ನಾನು ದೈವಾಂಶ ಸಂಭೂತನಲ್ಲ. ನನಗೆ ಜನರೇ ದೇವರು, ಅವರೇ ತೀರ್ಮಾನಿಸುತ್ತಾರೆ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
“ನನ್ನ ಮುಂದೆ ಎರಡು ಆಯ್ಕೆಗಳಿವೆ. ನಾನು ವಯನಾಡು ಸಂಸದನಾಗಿ ಮುಂದುವರಿಯಬೇಕೋ, ರಾಯ್‌ಬರೇಲಿ ಸಂಸದನಾಗಬೇಕೋ ಎಂಬ ಪ್ರಶ್ನೆ ಇದೆ. ಆದರೆ, ಪ್ರಧಾನಿಯವರಂತೆ ನನಗೆ ದೇವರು ಮಾರ್ಗದರ್ಶನ ನೀಡುವುದಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯನಾಗಿದ್ದು, ದೇಶದ ಬಡವರೇ ನನಗೆ ದೇವರಾಗಿದ್ದಾರೆ. ನಾನು ಯಾವ ಕ್ಷೇತ್ರದ ಸಂಸದನಾಗಿ ಮುಂದುವರಿಯಬೇಕೋ ಎಂಬುದನ್ನು ದೇಶದ ಜನರೇ ತೀರ್ಮಾನಿಸುತ್ತಾರೆ” ಎಂಬುದಾಗಿ ಕೇರಳದ ಮಲಪ್ಪುರಂನಲ್ಲಿ ರಾಹುಲ್ ಗಾಂಧಿ ಹೇಳಿದರು.
Tags