ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ

Waves of Karnataka


 ನರೇಂದ್ರ ಮೋದಿ ಮತ್ತೊಂದು ಅವಧಿಗೆ ಭಾರತದ ಪ್ರಧಾನಿಯಾಗುವುದು (Narendra Modi 3.0) ಪಾಕಿಸ್ತಾನದ ಸರ್ಕಾರಕ್ಕೆ ಇಷ್ಟವಿರಲಿಲ್ಲ. ಹಿಂದೂಸ್ತಾನದಲ್ಲೀಗ ಮೋದಿ ಯುಗ, ‘ಮೋದಿಯ ಭಾರತ’ ಎಂದು ಆಗಾಗ ಕರೆಯುತ್ತಿದ್ದರು. ಚುನಾವಣೆಯಲ್ಲಿ ಅವರು ಮತ್ತೊಂದು ಬಾರಿ ಆರಿಸಿ ಬರದಿರಲಿ ಎಂದು ಆಶಿಸಿದ್ದರು. ಅದರೆ, ಪಾಕ್​ನ ಲೆಕ್ಕಾಚಾರ ಉಲ್ಟಾ ಆಗಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನೀಗ ಶುಭಾಶಯ ಹೇಳದೆ ವಿಧಿಯಿಲ್ಲ. ಹೀಗಾಗಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಭಿನಂದನೆ ಸಲ್ಲಿಸಿದ್ದಾರೆ. “ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ @narendramodi ಅವರಿಗೆ ಅಭಿನಂದನೆಗಳು” ಎಂದು ಷರೀಫ್ ಎಕ್ಸ್​ ಪೋಸ್ಟ್​ ಮಾಡಿದ್ದಾರೆ.