ಸರ್ಕಾರ ರಚನೆಗೂ ಮುನ್ನ ನಿತೀಶ್‌ ಕುಮಾರ್‌ ಬಿಗ್‌ ಡಿಮ್ಯಾಂಡ್‌! ಬಿಜೆಪಿಗೆ ʼಅಗ್ನಿʼ ಪರೀಕ್ಷೆ ಗ್ಯಾರಂಟಿ!

Waves of Karnataka


 ಮೂರನೇ ಬಾರಿ ಅಧಿಕಾರಕ್ಕೆ ಬರುತ್ತಿರುವ ಬಿಜೆಪಿ(BJP) ನೇತೃತ್ವದ ಎನ್‌ಡಿಎ(NDA) ಸರ್ಕಾರಕ್ಕೆ ಈ ಬಾರಿ ಸಾಗಲಿರುವ ಹಾದಿ ಹೂವಿನ ಹಾಸಿಗೆಯಂತಿಲ್ಲ. ಈ ಬಾರಿ ಮಿತ್ರಗಳ ನೆರವಿನ ಜೊತೆಗೇ ಹೆಜ್ಜೆ ಹಾಕಬೇಕಾಗಿರುವ ಕಾರಣ ಮಿತ್ರ ಪಕ್ಷಗಳಿಂದ ಭಾರೀ ಅಗ್ನಿ ಪರೀಕ್ಷೆ ಎದುರಿಸಬೇಕಾದ ಸ್ಥಿತಿ ಇದೆ. ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರ ಹಾಕಿಕೊಂಡಿದ್ದ ಕೆಲವೊಂದು ಯೋಜನೆಗಳ ಜಾರಿಗೆ ಮಿತ್ರ ಪಕ್ಷಗಳೇ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಜೆಡಿಯು ಏನು ಬೇಡಿಕೆ ಇಡುತ್ತದೋ ಎಂಬ ಚಿಂತೆ ಬಿಜೆಪಿಗೆ ಇದ್ದೇ ಇದೆ. ಅದಕ್ಕೆ ಪೂರಕ ಎಂಬಂತೆ ಕೇಂದ್ರದ ಮಹತ್ವದ ಅಗ್ನಿಪಥ ಯೋಜನೆ(Agnipath Scheme)ಯನ್ನು ಮರುಪರಿಶೀಲಿಸುವಂತೆ ಜೆಡಿಯು ಬೇಡಿಕೆ ಇಟ್ಟಿದೆ.