ಅಕೌಂಟ್‌ಗೆ ಲಕ್ಷ ರೂ. ಹಾಕ್ತೇವೆ ಎಂದರೂ ಜನ ಕಾಂಗ್ರೆಸ್‌ಗೆ ಮತ ಹಾಕಲಿಲ್ಲ: ಮೋದಿ ವ್ಯಂಗ್ಯ
June 07, 2024
: ನಿಮ್ಮ ಖಾತೆಗೆ 1 ಲಕ್ಷ ರೂ. ಹಾಕ್ತೇವೆ, ನಮಗೆ ಮತ ಹಾಕಿ ಎಂದು ಕಾಂಗ್ರೆಸ್ ಪಕ್ಷ ದೇಶಾದ್ಯಂತ ಭಾರಿ ಪ್ರಚಾರ ನಡೆಸಿತು. ಕೊಡುಗೆಗಳ ಕಾರ್ಡ್‌ಗಳನ್ನು ಮನೆಮನೆಗೆ ವಿತರಿಸಿತು. ಆದರೂ ಜನ ಆ ಪಕ್ಷವನ್ನು ಧಿಕ್ಕರಿಸಿದ್ದಾರೆ. 1 ಲಕ್ಷ ಕೊಡಿ ಎಂದು ಕೆಲವೆಡೆ ಜನ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದಾರೆ ಎಂದು ನರೇಂದ್ರ ಮೋದಿ (Narendra Modi) ಅವರು ವ್ಯಂಗ್ಯವಾಡಿದರು.
ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆದ ಎನ್‌ಡಿಎ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಪಕ್ಷ ಅಧಿಕಾರ ಸಿಕ್ಕಾಗ ಜನಸೇವೆ ಮಾಡುವುದನ್ನು ಬಿಟ್ಟು ಈಗ ಅಧಿಕಾರ ಕಳೆದುಕೊಂಡ ಮೇಲೆ ಜನರಿಗೆ ನಾನಾ ಕೊಡುಗೆಗಳ ಆಮಿಷ ಒಡ್ಡುತ್ತ ಜನರನ್ನು ಮರಳು ಮಾಡುವ ವ್ಯರ್ಥ ಪ್ರಯತ್ನ ನಡೆಸುತ್ತಿದೆ ಎಂದು ಮೋದಿ ಹೇಳಿದರು.
Tags