ವಿಮಾನ ನಿಲ್ದಾಣದಲ್ಲೂ ಸಿದ್ದರಾಮಯ್ಯಗೆ ವಿಶ್ವಕಪ್‌ ಕ್ರಿಕೆಟ್‌ ಧ್ಯಾನ!

Waves of Karnataka


 ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಮರಳುವ ತರಾತುರಿಯ ನಡುವೆಯೂ ಕೆಲವು ಕ್ಷಣ ಬಿಡುವು ಮಾಡಿಕೊಂಡು ವಿಮಾನ ನಿಲ್ದಾಣದಲ್ಲಿ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯಾಟವನ್ನು (T20 World Cup Final) ವೀಕ್ಷಿಸಿದರು.

ವೈರಲ್‌ ಆಗಿರುವ ವಿಡಿಯೋದಲ್ಲಿ, ಟ್ಯಾಬ್‌ ಒಂದರಲ್ಲಿ ಸಿದ್ದರಾಮಯ್ಯ ಅವರು ಟಿ20 ವಿಶ್ವಕಪ್‌ನ ಭಾರತ- ದಕ್ಷಿಣ ಆಫ್ರಿಕ ನಡುವಿನ ಫೈನಲ್‌ ಪಂದ್ಯಾಟವನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ. ವಿಶೇಷ ವಿಮಾನ ಲ್ಯಾಂಡ್‌ ಆಗಿದ್ದರೂ, ವಿಮಾನದ ಮೆಟ್ಟಿಲು ಏರುವ ಮುನ್ನ ಅವರು ನಿಂತುಕೊಂಡೇ ಪಂದ್ಯ ವೀಕ್ಷಿಸಿದರು