ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಎಲ್ಲಿ? ಈ ಊರುಗಳ ಹೆಸರು ಫೈನಲ್
July 08, 2024
ಬೆಂಗಳೂರು (Bangalore) ನಗರಕ್ಕೆ ಉದ್ದೇಶಿತ ಎರಡನೇ ವಿಮಾನ ನಿಲ್ದಾಣಕ್ಕೆ (Bangalore Airport) ಕೆಲವು ಸ್ಥಳಗಳ ಹೆಸರುಗಳನ್ನು ಚಿಂತಿಸಲಾಗಿದೆ. ಅಂತಿಮವಾಗಿ ಸ್ಥಳವನ್ನು ನಿರ್ಧರಿಸಲು ರಾಜ್ಯ ಸರ್ಕಾರವು (Karnataka Govt) ಶೀಘ್ರದಲ್ಲೇ ಸಭೆಯನ್ನು ಕರೆಯಲಿದೆ. ಈ ವಿಚಾರವನ್ನು ಕರ್ನಾಟಕ ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ (MB Patil) ತಿಳಿಸಿದರು.ಆ ಊರುಗಳು? ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರ ಎರಡು ಪ್ರಮುಖ ಅಂಶಗಳನ್ನು ಪರಿಗಣಿಸಲಿದೆ. ಒಂದು ಪ್ರಯಾಣಿಕರ ಪ್ರಮಾಣ; ಎರಡನೆಯದು ಈಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಸಂಪರ್ಕ. ʼಪ್ರಯಾಣಿಕರ ಹೊರೆಗೆ ಆದ್ಯತೆ ನೀಡಿದರೆ ಸರ್ಜಾಪುರ, ಕನಕಪುರ ರಸ್ತೆಯಂತಹ (Sarjapur, kanakapura road) ಪ್ರದೇಶಗಳು ಮಹತ್ವದ ಸ್ಥಳವಾಗಿ ಪರಿಗಣನೆಯಾಗುತ್ತವೆ. ಮತ್ತೊಂದೆಡೆ, ಈಗಿರುವ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದು ಆದ್ಯತೆಯಾದರೆ ತುಮಕೂರು (Tumkur) ಮತ್ತು ದಾಬಸ್‌ಪೇಟೆಯಂತಹ (Dabaspet) ಸ್ಥಳಗಳು ಆದ್ಯತೆಯಾಗಿರುತ್ತವೆʼ ಎಂದು ಪಾಟೀಲ್ ಹೇಳಿದ್ದಾರೆ.ಈ ವಿಚಾರಗಳನ್ನು ಮುಂದಿನ ಇಲಾಖಾ ಸಭೆಯಲ್ಲಿ ಚರ್ಚಿಸಿ, ಸಿಎಂ ಜತೆ ಹೆಚ್ಚಿನ ಪರಿಶೀಲನೆ ನಡೆಸಲಾಗುವುದು, ಸಂಪುಟ ಸಭೆಯಲ್ಲೂ ವಿಷಯ ಪ್ರಸ್ತಾಪಿಸಲಾಗುವುದು. 150 ಕಿಮೀ ವ್ಯಾಪ್ತಿಯೊಳಗೆ ಮತ್ತೊಂದು ವಿಮಾನ ನಿಲ್ದಾಣವನ್ನು ಸ್ಥಾಪಿಸುವುದನ್ನು ನಿರ್ಬಂಧಿಸುವ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ನೊಂದಿಗೆ ವಿಶೇಷ ಷರತ್ತು 2032 ರಲ್ಲಿ ಕೊನೆಗೊಳ್ಳುತ್ತದೆ. ಇದು 2033 ರ ವೇಳೆಗೆ ಹೊಸ ವಿಮಾನ ನಿಲ್ದಾಣದ ಸಂಭಾವ್ಯ ಅಭಿವೃದ್ಧಿಗೆ ಅವಕಾಶ ನೀಡುತ್ತದೆ. ಭೂಸ್ವಾಧೀನ ಮತ್ತು ಭೂಮಾಲೀಕರಿಗೆ ಪರಿಹಾರ ನೀಡಲು ಅಗತ್ಯವಿರುವ ಸಮಯ, ಸರ್ಕಾರವು ಯೋಜನಾ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ” ಎಂದು ಸಚಿವರು ಹೇಳಿದರು.
Tags