ಪಾಕಿಸ್ತಾನ ತಂಡವನ್ನು ಸೋಲಿಸಿ ಲೆಜೆಂಡ್ಸ್ ವಿಶ್ವ ಕಪ್-2024 ಟ್ರೋಫಿ ಗೆದ್ದ ಭಾರತ
July 13, 2024
ಪಾಕಿಸ್ತಾನ ತಂಡವನ್ನು ಮಣಿಸಿದ ಇಂಡಿಯಾ ಚಾಂಪಿಯನ್ಸ್ ತಂಡ ಉದ್ಘಾಟನಾ ಆವೃತ್ತಿಯ ಲೆಜೆಂಡ್ಸ್ ವಿಶ್ವ ಕಪ್ನಲ್ಲಿ (Legends World Cup 2024 ) ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಕ್ರಿಕೆಟ್ ದೇಶಗಳ ನಿವೃತ್ತ ಆಟಗಾರರನ್ನು ಒಳಗೊಂಡಿರುವ ಟೂರ್ನಿಯಾಗಿದೆ. ಮೊದಲ ಆವೃತ್ತಿಯಲ್ಲಿ ಗೆದ್ದ ಯುವರಾಜ್ ಸಿಂಗ್ ನೇತೃತ್ವದ ಭಾರತ ತಂಡ 2007ರ ಟಿ20 ವಿಶ್ವ ಕಪ್ ಟೂರ್ನಿಯನ್ನು ನೆನಪಿಸಿದೆ. ಟಿ20 ವಿಶ್ವ ಕಪ್ನ ಮೊದಲ ಆವೃತ್ತಿಯಲ್ಲೇ ಧೋನಿ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು. ಅಲ್ಲೂ ಪಾಕಿಸ್ತಾನವನ್ನೇ ಕೊನೇ ಎಸೆತದಲ್ಲಿ ಪಡೆದ ನಾಟಕೀಯ ಫಲಿತಾಂಶದ ಮೂಲಕ ಸೋಲಿಸಿತ್ತು.
Tags