ಶುಭಾಶಯ ಕೋರಿದ ನರೇಂದ್ರ ಮೋದಿಗೆ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ; ಇಲ್ಲಿದೆ ಅದರ ವಿವರ
July 01, 2024
ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup 2024 ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಭಾರತ ತಂಡದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ ಶುಭಾಶಯ ತಿಳಿಸಿದ್ದರು. ಇದೇ ವೇಳೆ ಟಿ20 ಮಾದರಿಯಲ್ಲಿ ನಿವೃತ್ತಿ ಪಡೆದ ಕೊಹ್ಲಿ, ಹಾಗೂ ರೋಹಿತ್ಗೂ ವಿಶೇಷ ಹಾರೈಕೆಗಳನ್ನು ತಿಳಿಸಿದ್ದರು. ಆ ಸಂದೇಶಕ್ಕೆ ವಿರಾಟ್ ಕೊಹ್ಲಿ (Virat Kohli) ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಮಣಿಸಿದ ಭಾರತ ಇತಿಹಾಸದಲ್ಲಿ ಎರಡನೇ ಬಾರಿಗೆ ಟಿ 20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. 2007 ರಲ್ಲಿ ಉದ್ಘಾಟನಾ ಆವೃತ್ತಿಯನ್ನು ಗೆದ್ದ ನಂತರ ಮೊದಲ ಬಾರಿಗೆ ಈ ಟ್ರೋಫಿ ಗೆದ್ದಿತು. ಸೆಮಿಫೈನಲ್ ತನಕ ಬ್ಯಾಟಿಂಗ್ನಲ್ಲಿ ಹೆಣಗಾಡುತ್ತಿದ್ದ ವಿರಾಟ್ ಕೊಹ್ಲಿ, ಫೈನಲ್ನಲ್ಲಿ ನಿರ್ಣಾಯಕ ಅರ್ಧ ಶತಕ ಬಾರಿಸಿದ್ದರು.
Tags