ನನ್ನ ದನಿಯೂ ಗಟ್ಟಿಯಿದೆ, ಸಂಕಲ್ಪವೂ; ಈ ಮೋದಿ ಯಾರಿಗೂ ಹೆದರಲ್ಲ, ಬಗ್ಗಲ್ಲ: ಸಂಸತ್‌ನಲ್ಲಿ ಪ್ರಧಾನಿ ಅಬ್ಬರ
July 02, 2024
ಜವಾಹರ ಲಾಲ್ ನೆಹರು ಅವರಿಂದ ಹಿಡಿದು ಸೀತಾರಾಮ್ ಕೇಸರಿ ಅವರತನಕ ಉದಾಹರಣೆ, ನಿದರ್ಶನ, ಕತೆಗಳು, ಉಪಕತೆಗಳ ಮೂಲಕ ನರೇಂದ್ರ ಮೋದಿ (Narendra Modi) ಅವರು ಸಂಸತ್‌ನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ನರೇಂದ್ರ ಮೋದಿ, ರಾಹುಲ್ ಗಾಂಧಿ (Rahul Gandhi), ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇನ್ನು ಭಾಷಣದ ಕೊನೆಯಲ್ಲಿ, “ನನ್ನ ದನಿ ಇನ್ನೂ ಗಟ್ಟಿ ಇದೆ. ಸಂಕಲ್ಪವೂ ಅಷ್ಟೇ ದೃಢವಾಗಿದೆ. ಈ ಮೋದಿ ಯಾರಿಗೂ ಹೆದರುವುದಿಲ್ಲ” ಎಂದು ಅಬ್ಬರಿಸಿದರು.
“ನಾನು ಕಾಂಗ್ರೆಸ್‌ನವರಿಗೆ ಜಾಣತನ ಕೊಡಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಬಾಲಬುದ್ಧಿಯ ನಾಯಕನಿಗೂ ಬುದ್ಧಿ ಕೊಡಲಿ. ರಾಷ್ಟ್ರಪತಿಯವರ ಭಾಷಣಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಹಾಗೆಯೇ, ಇಷ್ಟು ಹೊತ್ತು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿಯೂ ಧನ್ಯವಾದ ತಿಳಿಸುತ್ತೇನೆ. ಯಾರು ಎಷ್ಟೇ ಗಲಾಟೆ ಮಾಡಿದರೂ ನನ್ನ ಧ್ವನಿಯನ್ನು, ಸತ್ಯದ ಧ್ವನಿಯನ್ನು ಅಡಗಿಸಲು ಆಗುವುದಿಲ್ಲ. ನಾನು ಇದುವರೆಗೆ ಸತ್ಯದ ಅನುಭವವನ್ನು ಅನುಭವಿಸಿದ್ದೇನೆ” ಎಂದು ಹೇಳಿದರು
Tags