ಬೆಂಗಳೂರಿಗೆ ಬಂದಿದೆ ಪಾನಿಪುರಿ ನೀಡುವ ಮೆಷಿನ್! ಇದು ಹೇಗಿದೆ ನೋಡಿ

Waves of Karnataka


 ಪಾನಿಪುರಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರೂ ಶಾಪಿಂಗ್‌ಗೆಂದು ಹೊರಗೆ ಹೊರಟರೆ ಬೀದಿ ಬದಿಯಲ್ಲಿ ಪಾನೀಪುರಿ ಮಾರುತ್ತಿದ್ದರೆ ಅದನ್ನು ತಿನ್ನದೇ ಮುಂದೆ ಹೋಗಲು ಇಷ್ಟವಾಗುವುದಿಲ್ಲ. ಪತಿ ತಮ್ಮ ಪತ್ನಿಯನ್ನು ಓಲೈಸಲು, ಪೋಷಕರು ತಮ್ಮ ಮಕ್ಕಳಿಗೆ ಖುಷಿ ಪಡಿಸಲು ಹಾಗೂ ಯುವಕರು ತಮ್ಮ ಪ್ರೇಯಸಿಯ ಪ್ರೀತಿಯನ್ನು ಗಳಿಸಲು ಒಂದು ಪ್ಲೇಟ್ ಪಾನೀಪುರಿ ಕೊಡಿಸುವುದಂತು ಖಂಡಿತ. ಇದೀಗ ಪಾನಿಪುರಿ ಪ್ರಿಯರಿಗೆ ಖುಷಿ ವಿಚಾರ. ಅದೇನೆಂದರೆ ಈಗ ಪಾನಿಪುರಿ ( Pani Puri Machine) ವಿತರಿಸುವ ಮೆಷಿನ್ ಬಂದಿದೆಯಂತೆ. ಅದರಿಂದ ನಿಮಗಿಷ್ಟವಾದ ಫ್ಲೇವರ್ಸ್‍ನಲ್ಲಿ ಪಾನಿಪುರಿಯನ್ನು ಸವಿಯಬಹುದು. ಈ ಸ್ವಯಂಚಾಲಿತ ಪಾನಿಪುರಿ ಮೆಷಿನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.