ಹೊನ್ನಾವರ-ತಾಳಗುಪ್ಪ ರೈಲ್ವೆ ಮಾರ್ಗ; ಮಂಕಿಯ ಬಿಜೆಪಿ ಮುಖಂಡರಿಂದ ಸಂಸದ ಕಾಗೇರಿಯವರಿಗೆ ಮನವಿ
July 14, 2024
ಬೆಂಗಳೂರಿನಿಂದ ಸಾಗರದ ತಾಳಗುಪ್ಪದವರೆಗೆ ರೈಲ್ವೆ ಮಾರ್ಗವಿದೆ. ಆದರೆ ಅಲ್ಲಿಂದ ಹೊನ್ನಾವರಕ್ಕೆ ಬೇರೆ ವಾಹನದಲ್ಲಿ ಬರಲು ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ತಾಳಗುಪ್ಪದಿಂದ ಹೊನ್ನಾವರದವರೆಗೆ ರೈಲ್ವೆ ಮಾರ್ಗ ನಿರ್ಮಿಸಿದರೆ ಹೊನ್ನಾವರ ಸುತ್ತಮುತ್ತಲಿನ ಜನರಿಗೆ ಬೆಂಗಳೂರಿನಿಂದ ಸುಗಮವಾಗಿ ಆಗಮಿಸಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಂಕಿಯ ಬಿಜೆಪಿ ಮುಖಂಡರು ಮತ್ತು ನಾಗರಿಕರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಪತ್ರ ಅರ್ಪಿಸಿದರು.
Tags