ಲಾರ್ವಾ ಸರ್ವೇ; ಜಿಪಿಎಸ್ ಇಲ್ಲದ ಹಳೆ ಫೋಟೋ ತೋರಿಸಿ ಕೋಟ್ಯಂತರ ರೂ. ಮೋಸ; ಶರವಣ ಆರೋಪ

Waves of Karnataka


 ಲಾರ್ವಾ ಸಮೀಕ್ಷೆಯ ಜಿಪಿಎಸ್ ಇಲ್ಲದ ಹಳೇ ಫೋಟೋಗಳನ್ನು ತೋರಿಸಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಮೋಸ ಮಾಡುತ್ತಿದ್ದಾರೆ. ಇದು ನಾಗರಿಕರ ಆರೋಗ್ಯದ ಜತೆ ಚೆಲ್ಲಾಟ ನಡೆಸಿದಂತೆ. ಇಂತಹ ತಪ್ಪುಗಳು ಪುನರಾವರ್ತಿಸದಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಹಾಗೂ ತಪ್ಪುಗಳು ಪುನರಾವರ್ತಿಸಿದಲ್ಲಿ ಅಂತಹ ಅಧಿಕಾರಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂಎಲ್‌ಸಿ ಟಿ.ಎ. ಶರವಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.