ಚುನಾವಣೆ ವೇಳೆ ಮಾತ್ರ ಕಾಂಗ್ರೆಸ್ ಬಣ್ಣ ಬಣ್ಣದ ಕಥೆ ಕಟ್ಟುತ್ತದೆ: ಪ್ರಲ್ಹಾದ್‌ ಜೋಶಿ

Waves of Karnataka


 ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಮಾತ್ರ ಬಡವರ ಪರ, ಪರಿಶಿಷ್ಟರ ಪರ ಎನ್ನುತ್ತ ಬಣ್ಣ ಬಣ್ಣದ ಕತೆ ಕಟ್ಟುತ್ತದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಟೀಕಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ನಿಜವಾಗಿ ಬಡವರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ. ಚುನಾವಣೆ ವೇಳೆ ಮಾತ್ರ ಅವರನ್ನು ಓಲೈಸಿಕೊಳ್ಳಲು ಬಣ್ಣ ಬಣ್ಣದ ಕಥೆ ಕಟ್ಟಿ ರಾಜಕಾರಣ ಮಾಡುತ್ತದೆ ಎಂದು ಆರೋಪಿಸಿದ್ದಾರೆ.