ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಆ ʼಅಂಗʼಕ್ಕೆ ಕತ್ತರಿ ಹಾಕಿದ ಪ್ರಿಯತಮೆ

Waves of Karnataka


 ಪ್ರೀತಿಸಿ ಯುವತಿಯರನ್ನು ಬಳಸಿಕೊಂಡು ಮೋಸ ಮಾಡುವಂತಹ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಯುವಕರ ಮೋಸದ ಪ್ರೀತಿಗೆ ಎಷ್ಟೋ ಯುವತಿಯರ ಜೀವನ ಹಾಳಾಗಿದೆ. ಹಾಗಾಗಿ ಇವರಲ್ಲಿ ಕೆಲವು ಯುವತಿಯರು ಮಾನ ಮರ್ಯಾದೆಗೆ ಅಂಜಿ ಜೀವ ಕಳೆದುಕೊಂಡಿದ್ದಾರೆ, ಆದರೆ ಇಲ್ಲೊಬ್ಬ ಯುವತಿ ಪ್ರೀತಿಸಿ (Viral News) ಮೋಸ ಮಾಡಿದವನಿಗೆ ತಕ್ಕ ಶಿಕ್ಷೆ ವಿಧಿಸಿದ್ದಾಳೆ.

ಬಿಹಾರದ ಸರನ್ ಜಿಲ್ಲೆಯಲ್ಲಿ ಮಹಿಳಾ ವೈದ್ಯೆಯೊಬ್ಬಳು ಪ್ರೀತಿಸಿ ತನ್ನ ಜೊತೆ ಸಂಬಂಧ ಬೆಳೆಸಿ ಮದುವೆಯಾಗಲು ನಿರಾಕರಿಸಿದ ಗೆಳೆಯನ ಖಾಸಗಿ ಭಾಗವನ್ನು ಕತ್ತರಿಸಿದ ಘಟನೆ ಜುಲೈ 1ರಂದು ನಡೆದಿದೆ. ಸಂತ್ರಸ್ತ ಪ್ರಕಾಶ್ ಅಲಿಯಾಸ್ ವಿಕಾಶ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಮಧೌರಾ ಬ್ಲಾಕ್‌ನ ವಾರ್ಡ್ ಸಂಖ್ಯೆ 12ರ ಕೌನ್ಸಿಲರ್ ಆಗಿದ್ದ ಎನ್ನಲಾಗಿದೆ. ಕಳೆದ ಐದು ವರ್ಷಗಳಿಂದ ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಅವನು ಅವಳನ್ನು ಮದುವೆಯಾಗಲು ನಿರಾಕರಿಸುತ್ತಿದ್ದನು. ತಾನು ಸಂಬಂಧ ಬೆಳೆಸಿದ ತಪ್ಪಿಗೆ ಯುವತಿ ಹೇಗೋ ನ್ಯಾಯಾಲಯದಲ್ಲಿ ಮದುವೆಯಾಗಲು ಅವನನ್ನು ಮನವೊಲಿಸಿದಳು. ಆದರೆ ಅಂದು ಆತ ಮದುವೆಯಾಗಲು ನ್ಯಾಯಾಲಯಕ್ಕೆ ಬರದೆ ತಪ್ಪಿಸಿಕೊಂಡ. ಇದರಿಂದ ಕೋಪಗೊಂಡ ಯುವತಿ ಆ ವ್ಯಕ್ತಿಯನ್ನು ತನ್ನ ಮನೆಗೆ ಕರೆಸಿಕೊಂಡು, ಅವನ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ ಎನ್ನಲಾಗಿದೆ.