ತುಂಗಭದ್ರಾ ಜಲಾಶಯದಿಂದ 15 ಟಿಎಂಸಿ ನೀರು ವ್ಯರ್ಥ; ಇಂದು ಸಿಎಂ ಸಿದ್ದರಾಮಯ್ಯ ಭೇಟಿ

Waves of Karnataka


 ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್‌ ಗೇಟ್ (Tungabhadra Dam Crest gate) ಕಿತ್ತು ಹೋದ (Crest gate crash) ಪರಿಣಾಮ ಅನ್ಯಾಯವಾಗಿ 15 ಟಿಎಂಸಿ (TMC) ನೀರು ಯಾವ ಉಪಯೋಗಕ್ಕೂ ಬಾರದೆ ನದಿಪಾಲಾಗಿದೆ. ಇಂದು ನಡೆಯಬೇಕಿದ್ದ ಸಿಎಂ ಬಾಗಿನ ಕಾರ್ಯಕ್ರಮ ರದ್ದುಪಡಿಸಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ (CM Siddaramaiah) ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಲಿದ್ದಾರೆ.

ತುಂಗಭದ್ರಾ ಜಲಾಶಯ 105.788 ಟಿಎಂಸಿ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಭರಪೂರ ಮಳೆಯ ಪರಿಣಾಮ ಡ್ಯಾಮ್‌ ಪೂರ್ತಿಯಾಗಿ ತುಂಬಿತ್ತು. ಗೇಟ್ ಕೊಚ್ಚಿಹೋದ ದಿನ 105.788 ಟಿಎಂಸಿ ನೀರು ಸಂಗ್ರಹ ಇತ್ತು. ಅಂದಿನಿಂದ ಸದ್ಯದವರೆಗೆ 14ರಿಂದ 15 ಟಿಎಂಸಿಗೂ ಅಧಿಕ ನೀರು ನದಿ ಪಾಲಾಗಿದೆ. ಗೇಟ್ ಕಿತ್ತುಹೋಗಿದ್ದರಿಂದ ಯಾವುದೇ ಉಪಯೋಗಕ್ಕೆ ಬಾರದೇ ಜಲಾಶಯದ ನೀರು ಹರಿದುಹೋಗಿದೆ.