ಸ್ವಂತ ಮನೆಯಿಲ್ಲ ಎಂದ ಸಿಎಂ ಸಿದ್ದರಾಮಯ್ಯ ವಿರುದ್ಧ ನಟ ಚೇತನ್‌ ಅಹಿಂಸಾ ಕಿಡಿ

Waves of Karnataka


 4 ದಶಕಗಳಿಂದ ರಾಜಕೀಯದಲ್ಲಿದ್ದರೂ ನನಗೆ ಮೈಸೂರಿನಲ್ಲಿ ಸ್ವಂತ ಮನೆ ಇಲ್ಲ. ಈಗ ಕಟ್ಟಿಸುತ್ತಿದ್ದೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ನಟ ಚೇತನ್‌ ಅಹಿಂಸಾ ಕಿಡಿಕಾರಿದ್ದಾರೆ. ಬಂಡವಾಳಶಾಹಿ ಮಿತ್ರರು ಈಗಾಗಲೇ ಶ್ರೀಮಂತರಾಗಿರುವ ಸಿಎಂ ಸಿದ್ದರಾಮಯ್ಯ ಅವರಂತಹವರಿಗೆ ಹೆಚ್ಚು ಸಂಪತ್ತು ಮತ್ತು ಭೂಮಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಮಾನತಾವಾದವು ಇಂತಹ ಉಳ್ಳವರ ಪರವಾದ ರಾಜಕೀಯವನ್ನು ಕಿತ್ತುಹಾಕಬೇಕು ಎಂದು ನಟ ಚೇತನ್‌ ಅಹಿಂಸಾ (Actor Chetan Ahimsa) ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಲ್ಲಿ ಪ್ರತಿಕ್ರಿಯಿಸಿರುವ ಅವರು, 52 ಕೋಟಿ ಆಸ್ತಿ ಘೋಷಿಸಿದ್ದರೂ, ಸ್ವಂತ ಮನೆ ಹೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ವಿಪರ್ಯಾಸವೆಂದರೆ, ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿನ ಅವರ ಬಂಡವಾಳಶಾಹಿ ಮಿತ್ರರು ಈಗಾಗಲೇ ಶ್ರೀಮಂತರಾಗಿರುವ ಸಿಎಂ ಸಿದ್ದರಾಮಯ್ಯ ಅವರಂಥವರಿಗೆ ಹೆಚ್ಚು ಸಂಪತ್ತು ಮತ್ತು ಭೂಮಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತಿದ್ದಾರೆ. ನಮ್ಮ ಸಮಾನತಾವಾದವು ಇಂತಹ ಉಳ್ಳವರ ಪರವಾದ ರಾಜಕೀಯವನ್ನು ಕಿತ್ತುಹಾಕಬೇಕು ಎಂದು ತಿಳಿಸಿದ್ದಾರೆ.