ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

Waves of Karnataka


 ಉತ್ತರ ಕರ್ನಾಟಕದ ಪ್ರತಿಷ್ಠಿತ ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣೆಯು ಪೂರ್ಣ ಮಟ್ಟಕ್ಕೆ ಆರ್.ಎಲ್. 519.60 ಮೀ.ವರೆಗೆ (123 ಟಿ.ಎಂ.ಸಿ.) ತಲುಪಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೃಷ್ಣೆಯ ಜಲಧಿಗೆ ಬುಧವಾರ ಗಂಗಾಪೂಜೆ ನೇರವೇರಿಸಿ ಬಾಗಿನ (Almatti Dam) ಅರ್ಪಣೆ ಮಾಡಿದರು.

ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕೃಷ್ಣಾ ನ್ಯಾಯಾಧೀಕರಣ-1ರ ತೀರ್ಪಿನನ್ವಯ ಯು.ಕೆ.ಪಿ.-1 ಮತ್ತು 2 ರಲ್ಲಿ 173 ಟಿಎಂಸಿ. ನೀರಿನ ಹಂಚಿಕೆಯಡಿ ಒಟ್ಟು 6.67 ಲಕ್ಷ ಹೆಕ್ಟೇರ್ (16.47 ಲಕ್ಷ ಎಕರೆ) ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.