ಅವಶ್ಯಕತೆ ಇಲ್ಲದ ಗ್ಯಾರಂಟಿ ಯೋಜನೆಯನ್ನ ತೆಗೆಯುವುದು ಒಳ್ಳೆಯದು - ಶಾಸಕ ದರ್ಶನ್‌ ಪುಟ್ಟಣಯ್ಯ

Waves of Karnataka


 ಗ್ಯಾರಂಟಿ ಯೋಜನೆಯ ಪರಿಶೀಲನೆಗೆ ಸಮೀಕ್ಷೆ ನಡೆಸಬೇಕು. ಅವಶ್ಯಕತೆ ಇಲ್ಲದ ಗ್ಯಾರಂಟಿ ಯೋಜನೆಯನ್ನ ತೆಗೆಯುವುದು ಒಳ್ಳೆಯದು ಎಂದು ಮಂಡ್ಯ ಜಿಲ್ಲೆ ಪಾಂಡವಪುರ ಶಾಸಕ ದರ್ಶನ್‌ ಪುಟ್ಟಣಯ್ಯ ತಿಳಿಸಿದ್ದಾರೆ.

ಕಾಂಗ್ರೆಸ್‌ ಬೆಂಬಲಿತ, ಸರ್ವೋದಯ ಕರ್ನಾಟಕ ಪಕ್ಷದ ಶಾಸಕರಾದ ದರ್ಶನ್‌ ಅವರೇ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಭಿವೃದ್ಧಿಗೆ ಸೂಕ್ತ ಅನುದಾನ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ

ಪಾಂಡವಪುರದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಅಭಿವೃದ್ಧಿಗೆ ಹಣ ಬರ್ತಿಲ್ಲ, ದೊಡ್ಡ ಮಟ್ಟದ ಫಂಡ್ ಬರ್ತಿಲ್ಲ. ಅಭಿವೃದ್ಧಿ ಮಾಡೋಕೆ ಸಾಕಷ್ಟು ಸಮಸ್ಯೆ ಆಗ್ತಿದೆ. ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ.

ಎಷ್ಟಿದೆ ಅದರಲ್ಲಿ ಸರ್ಕಾರ ಮ್ಯಾನೇಜ್ ಮಾಡ್ತಿದ್ದಾರೆ. ಹಿಂದಿನ ಕೆಲಸಗಳ ಪೇಮೆಂಟ್ ಮಾಡೋದೆ ಸಾಕಷ್ಟು ಪೆಂಡಿಂಗ್ ಇದೆ. ಸಾವಿರಾರು ಕೋಟಿ ಪೇಮೆಂಟ್ ಮಾಡಬೇಕು. ಜನರ ಬಳಿ ಹೋದ ಸಂದರ್ಭದಲ್ಲಿ ಮುಜುಗರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.