ರಾಜ್ಯದಲ್ಲಿ ಡ್ರಗ್ಸ್ ದಂಧೆ ನಿಯಂತ್ರಣ ಮಾಡುವುದು ರಾಜ್ಯ ಸರ್ಕಾರಕ್ಕೆ ಬಹು ದೊಡ್ಡ ಸವಾಲಾಗಿದೆ. ಅದರಲ್ಲಿ ನೋವಿನ ಮಾತ್ರೆಗಳು ( ಪೇನ್ ಕಿಲ್ಲರ್) ಆತಂಕ ಸೃಷ್ಟಿಸಿದೆ. ಮೆಡಿಕಲ್ ಗಳಲ್ಲಿ ಇದು ಸುಲಭವಾಗಿ ದೊರೆಯುತ್ತಿದ್ದು, ಯುವಕ ಯುವತಿಯರು ಇದನ್ನೇ ಡ್ರಗ್ ರೂಪದಲ್ಲಿ ಬಳಕೆ ಮಾಡುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಸುಲಭವಾಗಿ ಸಿಗುತ್ತಿರುವ ಪೈನ್ ಕಿಲ್ಲರ್ ಮಾತ್ರೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.