ಒಂದು ಕಾಲದ ದೋಸ್ತು ಇವಾಗ ದುಷ್ಮನ್! ಮುನಿರತ್ನ ವಿರುದ್ಧ ತಿರುಗಿ ಬಿದ್ದರೇ ಎಸ್ ಟಿ ಸೋಮಶೇಖರ್

Waves of Karnataka
0 minute read


 ಎಸ್ ಬಿ ಎಂ! ಹೌದು, ಆಪರೇಷನ್ ಕಮಲದ ಸಂದರ್ಭದಲ್ಲಿ ಕೇಳಿ ಬರುತ್ತಿದ್ದ ಮೂರು ಹೆಸರುಗಳಿವು. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಈ ಮೂರು ಶಾಸಕರು ಏಕಾಏಕಿ ಆಪರೇಷನ್ ಕಮಲಕ್ಕೆ ಒಳಗಾಗಿದ್ದು, ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರನ್ನೇ ಬೆಚ್ಚಿ ಬೀಳಿಸಿತ್ತು.ಅಂದ ಹಾಗೆ ಎಸ್ ಬಿ ಎಂ ಎಂದರೆ, ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ ಹಾಗೂ ಮುನಿರತ್ನ. ಕಾಂಗ್ರೆಸ್ ಪಕ್ಷದಲ್ಲಿ ಅದರಲ್ಲೂ ಸಿದ್ದರಾಮಯ್ಯಗೆ ಬಹಳ ಆತ್ಮೀಯರಾಗಿದ್ದ ಈ ಮೂವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಸೇರ್ಪಡೆ ಆದರು.