ಟಾಲಿವುಡ್‌ನಲ್ಲಿ ಸದ್ಯ ದೇವರ ಚಿತ್ರದ (Devara Movie) ಕ್ರೇಜ್ ಜಾಸ್ತಿ ಜೋರಾಗಿದೆ. ಅಡ್ವಾನ್ಸ್ ಬುಕ್ಕಿಂಗ್ನಲ್ಲೂ ದಾಖಲೆ ಬರೆದಿದೆ. ವಿದೇಶದಲ್ಲೂ ಪ್ರೀಮಿಯರ್ ಶೋ (Premier Show) ಕ್ರೇಜ್ ಕ್ರಿಯೇಟ್ ಆಗಿದೆ. ಆಂಧ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ (Junior NTR) ಫ್ಯಾನ್ಸ್ ಹಬ್ಬ ಮಾಡುತ್ತಿದ್ದಾರೆ. ಆರು ವರ್ಷಗಳ ನಂತರ ಸೋಲೋ ಹೀರೋ ಆಗಿ ಎನ್ ಟಿಆರ್ ಚಿತ್ರ ಬರುತ್ತಿದ್ದು, ನಿರೀಕ್ಷೆ ಕೂಡ ದುಪ್ಪಾಟ್ಟಾಗಿದೆ. ಸೆಪ್ಟೆಂಬರ್ 27ರಂದು ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಎಲ್ಲೆಲ್ಲೂ ಜೂ. ಎನ್ಟಿಆರ್ ಕಟೌಟ್ಗಳು ರಾರಾಜಿಸುತ್ತಿದೆ. ಆಂಧ್ರದಲ್ಲಿ ಜೂನಿಯರ್ ಎನ್ಟಿಆರ್ ಕಟೌಟ್ಗೆ ರಕ್ತದ ಅಭಿಷೇಕ ಮಾಡಿದ್ದಾರೆ ಎನ್ನಲಾಗ್ತಿದೆ. ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಜೂನಿಯರ್ ಎನ್ಟಿಆರ್ ಕಟೌಟ್ಗೆ ರಕ್ತದ ಅಭಿಷೇಕ? ಇದೇನು ಅಭಿಮಾನವೋ, ಹುಚ್ಚಾಟವೋ?
September 22, 2024