ರಜಾದಿನ ನೋಡಿ ಮುನಿರತ್ನ ಅರೆಸ್ಟ್ ; ನೈತಿಕತೆ ಇದೆಯೇನ್ರಿ ನಿಮಗೆ? ಸರ್ಕಾರದ ವಿರುದ್ಧ ಅಶ್ವತ್ಥ್ ನಾರಾಯಣ್ ವಾಗ್ದಾಳಿ

Waves of Karnataka


 ಧ್ವನಿ ಸುರುಳಿಯೇ ನನ್ನದಲ್ಲ ಎಂದು ಶಾಸಕ ಮುನಿರತ್ನ ಹೇಳಿಕೆ ಕೊಟ್ಟಿದ್ದಾರೆ. ಪೊಲೀಸರ ತನಿಖೆಯಿಂದ ಸತ್ಯಾಂಶ ಗೊತ್ತಾಗಲಿ' ಎಂದು ಬೆಂಗಳೂರಿನಲ್ಲಿ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.ಚುನಾಯಿತ ಪ್ರತಿನಿಧಿಯನ್ನು ಹೆದರಿಸುವ ಕೆಲಸ ಮಾಡಬಾರದು. ರಜಾ ದಿನ ನೋಡಿಕೊಂಡು ಅರೆಸ್ಟ್ ಮಾಡಿದ್ದಾರೆ. ನೀವು ಮಾಡಿದರೂ ತಪ್ಪೇ, ನಾವು ಮಾಡಿದರೂ ತಪ್ಪು. ಕಾನೂನಿನ ಬಗ್ಗೆ ನಿಮಗೆ ವಿಶ್ವಾಸ ಇಲ್ವಾ? ರಜಾದಿನ ನೋಡಿಕೊಂಡು ಏಕಾಏಕಿ ಅರೆಸ್ಟ್ ಮಾಡಿದ್ದಾರೆ. ಸರ್ಕಾರ ಇಟ್ಟುಕೊಂಡಿರುವ ನಿಮಗೆ ನೈತಿಕತೆ ಇದೆಯಾ? ಇದು ನಿಮ್ಮ ಪೌರುಷ, ಇದು ನಿಮ್ಮ ಸಾಧನೆ ಸ್ವಾಮಿ' ಎಂದು ಅಶ್ವತ್ಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.