ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ‘ಆ ಇಬ್ಬರ’ ಬಗ್ಗೆ ರಮೇಶ್ ಜಾರಕಿಹೊಳಿಗೆ ಇನ್ನೂ ಸಿಟ್ಟಿದೆ: ಯತ್ನಾಳ್

Waves of Karnataka


 ರಮೇಶ್ ಜಾರಕಿಹೊಳಿ ವಿರುದ್ಧ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಷಡ್ಯಂತ್ರವೇ ನಡೆದಿತ್ತು. ಆ ಬಗ್ಗೆ ಜಾರಕಿಹೊಳಿಯವರಿಗೆ ಆ ಇಬ್ಬರ ಮೇಲೆ ಇನ್ನೂ ಸಿಟ್ಟಿದೆ. ಅವರ ಜೀವನದಲ್ಲಿ ಹಿಂದೆಂದೂ ಕಂಡಿರದಂಥ ಅವಮಾನ ಅವರಿಗಾಗಿತ್ತು ಹಾಗಾಗಿ, ಅವರ ಸಿಟ್ಟು ಇನ್ನೂ ಆ ಇಬ್ಬರ ಮೇಲೆ ಆರಿಲ್ಲ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಲಿಗೆ ರಮೇಶ್ ಜಾರಕಿಹೊಳಿಯವರ ಸಿಡಿ ವಿಚಾರದ ಬಗ್ಗೆ ಮಾತನಾಡುವುದಾದರೆ ಅಸಲಿಗ ಅಲ್ಲಿ ಅತ್ಯಾಚಾರವೇ ಆಗಿಲ್ಲ. ದೆಹಲಿಯಲ್ಲಿದ್ದ ಜಾರಕಿಹೊಳಿಯವರಿಗೆ ಆ ಮಹಿಳೆಯೇ ಕಾಲ್ ಮಾಡಿ ನನ್ನನ್ನು ಬಿಟ್ಟು ದೆಹಲಿಗೆ ಹೋಗಿದ್ದೀಯಾ ಅಂತ ಹೇಳಿದ್ದಾಳೆ. ಬಳಿಕ ಆಕೆಯೂ ದೆಹಲಿಗೆ ಹೋಗಿ ಅವರು ಇರುವ ಜಾಗಕ್ಕೆ ಹೋಗಿದ್ದಾಳೆ. ಅಲ್ಲಿ ಅವರಿಬ್ಬರ ನಡುವೆ ಏನಾಗಿದೆಯೋ ಅದೆಲ್ಲವೂ ಅವರಿಬ್ಬರ ಪರಸ್ಪರ ಸಮ್ಮತಿಯಿಂದ ಆಗಿರುವಂಥದ್ದು. ಹಾಗಿರುವಾಗ ಅದು ಅತ್ಯಾಚಾರ ಹೇಗಾಗುತ್ತೆ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ