Nagamangala Case: ನಾಗಮಂಗಲ ಗಲಭೆಯು ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವಷ್ಟೇ; ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಸಂಚು- ಎಚ್‌ಡಿ ಕುಮಾರಸ್ವಾಮಿ

Waves of Karnataka


 ಗಣೇಶ ವಿಸರ್ಜನೆ ವೇಳೆ ನಾಗಮಂಗಲದ ಗಲಭೆ (Nagamangala Case) ವಿಚಾರಕ್ಕೆ ಸಂಬಂಧಿಸಿಂತೆ ಶುಕ್ರವಾರ ಕೇಂದ್ರ ಸಚಿವ ಎಚ್‌ಡಿ‌ ಕುಮಾರಸ್ವಾಮಿ (HD kumaraswamy) ನಾಗಮಂಗಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗಮಂಗಲದ ಇಡೀ ಘಟನೆ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವಷ್ಟೇ. 1990ರಲ್ಲಿ ವಿರೇಂದ್ರ ಪಾಟೀಲರನ್ನು ಸಿಎಂ ಕುರ್ಚಿಯಿಂದ ಕೆಳಗೆ ಇಳಿಸಲು ಗಲಭೆ ನಡೆಸಿದಂತೆ ಸಿದ್ದರಾಮಯ್ಯರನ್ನ ಸಿಎಂ ಕುರ್ಚಿಯಿಂದ‌ ಕೆಳಗೆ ಇಳಿಸಲು ಕಾಂಗ್ರೆಸ್‌ನಲ್ಲೇ ನಡೆಸಿರುವ ಸಂಚು ಎಂದು ಹೊಸ ಬಾಂಬ್ ಹಾಕಿದ್ದಾರೆ.


ಮಂಡ್ಯ ಜಿಲ್ಲೆಯ ನಾಗಮಂಗದಲ್ಲಿ ನಡೆದಿರುವ ಕೋಮು ದಳ್ಳೂರಿ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ನಿನ್ನೆ ಗುರುವಾರವಷ್ಟೆ ಬಿಜೆಪಿ ನಿಯೋಗ ಭೇಟಿ ನೀಡಿ ಹೋಗಿತ್ತು. ಆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ ನಾಯಕರು ನಾಗಮಂಗಲದ ಗಲಭೆಯನ್ನ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಗುಡುಗಿದ್ದರು.