ಸ್ವಪಕ್ಷೀಯರ ವಿರುದ್ಧವೇ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮಗೆ ಶಿಸ್ತು ಸಮಿತಿ ನೊಟೀಸ್ ಬಂದಿರುವ ಬಗ್ಗೆ ಹೊಸ ವರಸೆ ತೆಗೆದಿರುವ ಯತ್ನಾಳ್, ವಿಜಯೇಂದ್ರನೇ ನಕಲಿ ನೊಟೀಸ್ ಮಾಡಿಸಿದ್ದಾನೆ ಎಂದು ಆರೋಪಿಸಿದ್ದಾರೆ.
"ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಯತ್ನಾಳ್, ನನಗೆ ಈ ವರೆಗೂ ಅಧಿಕೃತವಾಗಿ ಪಕ್ಷದ ಕೇಂದ್ರ ಸಮಿತಿಯಿಂದ ನೊಟೀಸ್ ಬಂದಿಲ್ಲ, ವಾಟ್ಸ್ ಆಪ್ ನಲ್ಲಿ ನೊಟೀಸ್ ಬಂದಿದೆ. ವಾಟ್ಸ್ ಆಪ್ ನಲ್ಲಿ ಬಂದಿರುವುದನ್ನು ಹೇಗೆ ನಂಬಲಿ? ವಿಜಯೇಂದ್ರನೇ ನಕಲಿ ನೊಟೀಸ್ ಮಾಡಿಸಿದ್ದಾನೆ ಎನಿಸುತ್ತಿದೆ. ಅಧಿಕೃತವಾಗಿ ನೊಟೀಸ್ ಬಂದ ಬಳಿಕ ಸರಿಯಾದ ಉತ್ತರ ನೀಡುತ್ತೇನೆ" ಎಂದು ಹೇಳಿದ್ದಾರೆ.