ಗವಿಪುರದಲ್ಲಿರುವ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಈ ಬಾರಿ ವಿಸ್ಮಯ ನಡೆಯದಿರುವುದು ಭಕ್ತರಿಗೆ ನಿರಾಸೆ ಉಂಟು ಮಾಡಿತು.

Waves of Karnataka


 ಬೆಂಗಳೂರು: ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಆದರೆ ಸಿಲಿಕಾನ್ ಸಿಟಿಯ ಗವಿಪುರದಲ್ಲಿರುವ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಈ ಬಾರಿ ವಿಸ್ಮಯ ನಡೆಯದಿರುವುದು ಭಕ್ತರಿಗೆ ನಿರಾಸೆ ಉಂಟು ಮಾಡಿತು.

ಸಾಮಾನ್ಯವಾಗಿ ಪ್ರತಿ ಮಕರ ಸಂಕ್ರಾಂತಿ ದಿನದಲ್ಲಿ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಚಮತ್ಕಾರ ನಡೆಯುತ್ತದೆ. ಇಂದು ಸಂಜೆ ಗವಿಗಂಗಾಧರೇಶ್ವರನ ಮೇಲೆ ದೇಗುಲ ಬಲಭಾಗದ ಕಮಾನಿನಿಂದ ಕಿಟಕಿ ಮೂಲಕ ಸೂರ್ಯ ಕಿರಣಗಳು ಸ್ಪರ್ಶಿಸಬೇಕಿತ್ತು. ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದರು. ಈ ವಿಸ್ಮಯ ವೀಕ್ಷಿಸಲು ಭಕ್ತರಿಗಾಗಿ LED ಪರದೆ ಕೂಡ ಹಾಕಲಾಗಿತ್ತು.

ಆದರೆ ಮೋಡ ಕವಿದ ವಾತಾವರಣ ಇದ್ದುದರಿಂದ ಗವಿಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಮಾಡಲಿಲ್ಲ. ಇತಿಹಾಸದಲ್ಲೇ 3ನೇ ಬಾರಿ ಗವಿ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಬೀಳದಂತೆ ಆಗಿದೆ.